ಬೆಂಗಳೂರು :ಘನ ಕರ್ನಾಟಕ ಸರ್ಕಾರವು ಕೈವಾರ ತಾತಯ್ಯ ಯೋಗಿನಾರೇಯಣ ರವರ ಜಯಂತಿಯನ್ನು ಆಚರಿಸಲು ತೀರ್ಮಾನಿಸಿದರು. ಕರ್ನಾಟಕ ಸರಕಾರದ ವತಿಯಿಂದ ದಿನಾಂಕ 27-03-2022 ರ ದಿನದಂದು ಆಚರಿಸಲು ಹಾಗು ಮಕ್ಕಳ ಭವಿಷ್ಯಕ್ಕಾಗಿ ಬಡ್ಜೆಟ್ ನಲ್ಲಿ ಹಣವನ್ನು ಬಿಡುಗಡೆ ಮಾಡಿರುತ್ತಾರೆ ಇದಕ್ಕೆ ಕಾರಣಕರ್ತರಾದ ಶ್ರೀ. ಪಿ.ಸಿ. ಮೋಹನ್ (ಲೋಕಸಭಾ ಸದಸ್ಯರು ,ಬೆಂಗಳೂರು ಕೇಂದ್ರ ) ರವರು ಮತ್ತು ಸಹಕಾರ ನೀಡಿದಂತವರನ್ನು ಅಭಿನಂದಿಸಲು ಶೇಷಾದ್ರಿಪುರಂ , ಬ್ಯಾಟರಾಯನಪುರ, ಮಡಿವಾಳ, ವಿದ್ಯಾರಣ್ಯಪುರ, ಸಹಕಾರ ನಗರ, ಗೊರಗುಂಟೆಪಾಳ್ಯ, ಯಶವಂತಪುರ, ಚಿಂತಾಮಣಿ, ಚಿಕ್ಕಬಳ್ಳಾಪುರ ಮತ್ತು ಇತರ ಸ್ಥಳಗಳಿಂದ ಎಲ್ಲ ಕಾರ್ಯಕರ್ತರು ಹಾಗೂ ಸ್ನೇಹಿತರು ಶ್ರೀ.ಪಿ ಸಿ ಮೋಹನ್ ರವರ ಕಛೇರಿ ,ವಿಶ್ವೇಶ್ವರಯ್ಯ ಟವರ್ಸ್ ,2 ನೇ ಮಹಡಿ ಇಲ್ಲಿ ಸೇರಿ ಅವರ ಸಾಹಸಕ್ಕೆ ಬೆಂಗಳೂರಿನ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಇಂದು ಸೇರಿ ಗೌರವಿಸಿದರು.

ಮುಂದಿನ ದಿನಗಳಲ್ಲಿ ಶ್ರೀ. ಕೈವಾರ ತಾತಯ್ಯ ಅವರ ದೇವಸ್ಥಾನವನ್ನು ಶ್ರೀ .ಪಿ. ಸಿ ಮೋಹನ್ ಅವರ ನೇತತ್ವದಲ್ಲಿ ನಿರ್ಮಿಸಲು ತೀರ್ಮಾನಿಸಲಾಯಿತು.
ಕೈವಾರತಾತಯ್ಯ (ಜನನ :-೧೭೨೬ ಜೀವ ಸಮಾಧಿ:-೧೮೩೬)
ಕೈವಾರದ ಬಣಜಿಗರ ಕೊಂಡಪ್ಪ ಮತ್ತು ಮುದ್ದಮ್ಮ ದಂಪತಿಗೆ ಬಹುಕಾಲ ಮಕ್ಕಳಿಲ್ಲದಾಗ “ಅಮರ ನಾರಾಯಣೀಸ್ವಾಮಿಯ” ಆರಾಧನೆಯಿಂದ ಜನಿಸಿದ ಮಗನಿಗೆ “ನಾರಾಯಣಪ್ಪ “ಎಂದೇ ಹೆಸರಿಟ್ಟರು.ಬಾಲ್ಯದಲ್ಲಿಯೇ ಅಪ್ಪ -ಅಮ್ಮನನ್ನು ಕಳೆದುಕೊಂಡ ನಾರಾಯಣಪ್ಪ ಆಗಲೇ ವೈರಾಗ್ಯದತ್ತ ವಾಲಿದ್ದರು. ನಾರಾಯಣಪ್ಪ ಅವರ ಪತ್ನಿಯ ಹೆಸರು ಮುನಿಯಮ್ಮ.ಬಳೆ ಮಲಾರ ಹೊತ್ತು ಊರೂರು ತಿರುಗುತ್ತಿದ್ದ ನಾರಾಯಣಪ್ಪ ಅವರದು ಬಡ ಸಂಸಾರ.ಮೂವರು ಮಕ್ಕಳು.ಮುನಿಯಮ್ಮನಿಗೆ ದುಡ್ಡಿನ ವ್ಯಾಮೋಹ,ದುಡ್ಡಿಗೆ ಎಂದೂ ಬೆಲೆ ನೀಡದ ನಾರಾಯಣಪ್ಪ ಜನರು ದುಡ್ಡು ಕೊಡಲಿ,ಕೊಡದಿರಲಿ ಬಳೆ ತೊಡಿಸುತ್ತಿದ್ದರು.

ಒಂದು ಸಲ ಬಳೆ ವ್ಯಾಪಾರ ಮುಗಿಸಿಕೊಂಡು ಮನೆಗೆಮರಳುತ್ತಿದ್ದಾಗ ಮಳೆ ಶುರುವಾಯಿತು.ಸಮೀಪದ ಗುಹೆಯೊಳಗೆ ಹೋದ ನಾರಾಯನಪ್ಪನವರ ಬದುಕಿನಲ್ಲಿ ಇದು ಮಹತ್ವದ ಘಟ್ಟ.ಗುಹೆಯಲ್ಲಿದ್ದ “ಪರದೇಶಿ ಸ್ವಾಮಿ”ಇವರ ಗುರುವಾಗುತ್ತಾರೆ.ಮುಕ್ತಿ ಮಾರ್ಗ ತೋರಿಸಿ,ಅಷ್ಟಾಕ್ಷರಿ ಮಂತ್ರವನ್ನು ಬೋದಿಸುತ್ತಾರೆ.ಬೆಣಚು ಕಲ್ಲೊಂದನ್ನು ಕೊಟ್ಟು’ಇದನ್ನು ಬಾಯಲ್ಲಿಟ್ಟುಕೊಂಡು ಅಷ್ಟಾಕ್ಷರಿ ಮಂತ್ರವನ್ನು ಜಪಿಸು.ಅದು ಕರಗಿ ಕಲ್ಲು ಸಕ್ಕರೆಯಾದರೆ ಜ್ಞಾನ ಸಿದ್ದಿಯಾಗಿದೆ ಎಂದರ್ಥ’ ಎಂದು ಅಪ್ಪಣೆ ನೀಡುತ್ತಾರೆ. ದೈವ ಸಾಕ್ಷಾತ್ಕಾರಕ್ಕಾಗಿ ನಾರಾಯಣಪ್ಪ ಅನೇಕ ವರ್ಷ ಕೈವಾರದ ನರಸಿಂಹ ಗುಹೆಯಲ್ಲಿ ತಪಸ್ಸು ಮಾಡುತ್ತಾರೆ.ಬಾಯಲ್ಲಿ ಕಲ್ಲಿಟ್ಟುಕೊಂಡಿದ್ದರಿಂದ “ಓಂ ನಮೋ ನಾರಾಯಣಾಯ” ಎನ್ನುವುದರ ಬದಲು “ಓಂ ನಮೋ ನಾರೇಯಣಾಯ” ಎಂದು ಉಚ್ಹಾರವಾಗುತ್ತದೆ.ಒಂದು ದಿನ ಬಾಯಲ್ಲಿದ್ದ ಕಲ್ಲು ಕರಗಿ,ಕಲ್ಲು ಸಕ್ಕರೆಯಾಯಿತು.ಆ ಮೂಲಕ ಯೋಗಿ ನಾರಾಯಣ ಯತಿಯಾಗಿ ಬದಲಾದರು ಎನ್ನಲಾಗಿದೆ.ಸರಳ ಜೀವನ ನಡೆಸುತ್ತಿದ್ದ ಇವರು ಜಾತಿ ಪದ್ಧತಿ ತೊಲಗಿಸಲು ಶ್ರಮಿಸಿದ್ದಾರೆ. ” ಮಾನವರೆಲ್ಲರೂ ಮೂತ್ರ ದ್ವಾರದ ಮೂಲಕವೇ ತೋರಿ ಬಂದವರಾಗಿದ್ದಾರೆ.ಆದುದರಿಂದ ಉತ್ತಮ ಕುಲದವರನ್ನುವವರು ಯಾರೂ ಇಲ್ಲ.ಉತ್ತಮ ಕುಲವೆಂದು ಹೇಳುವ ಮಾತು ಯುಕ್ತವಲ್ಲಣ್ಣ “ಈ ಒಂದು ಮಾತಿನಿಂದಲೇ ತಿಳಿಯಬಹುದು ಅವರೆಷ್ಟು ಎತ್ತರದವರೆಂದು.ತಾತಯ್ಯನವರ ಪವಾಡಗಳು ಮತ್ತು ಕಾಲಜ್ಞಾನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಭಾರತದ ನಾಸ್ಟ್ರಡಾಮಸ್ಎಂದೇ ಇವರನ್ನು ಕರೆಯುತ್ತಾರೆ..ಇವರೊಬ್ಬ ನಿಜವಾದ ಮಾನವತಾವಾದಿ.
೧೧೦ ವರ್ಷ ಬದುಕಿದ್ದ ನಾರಾಯಣಪ್ಪ ೧೮೩೬ರಲ್ಲಿ ಜೀವ ಸಮಾಧಿಯಾದರು. ತಾತಯ್ಯನವರು ಜೀವ ಸಮಾಧಿಯಾದ ಕೈವಾರ ಕ್ಷೇತ್ರವು ಭಕ್ತರ ಪಾಲಿಗೆ ಶ್ರದ್ದಾತಾಣ.ಚಿಕ್ಕ ಬಳ್ಳಾಪುರ ಜಿಲ್ಲೆಯಲ್ಲಿನ ಈ ಕ್ಷೇತ್ರವು ಬೆಂಗಳೂರಿಗೆ ೭೫ ಕಿ.ಮೀ.ದೂರದಲ್ಲಿದೆ.ಶ್ರೀ ಕ್ಷೇತ್ರವು ನಾಲ್ಕು ಯುಗಗಳ ಇತಿಹಾಸ ವುಳ್ಳ ಪುರಾಣ ಪ್ರಸಿದ್ದ ಸ್ಥಳವಾಗಿ ಕಲಿಯುಗದ ವೈಕುಂಠವಾಗಿದೆ. ಇಲ್ಲಿ ಅಮರನಾರೇಯಣ ದೇವಾಲಯ ಸದ್ಗುರು ತಾತಯ್ ಬೃಂದಾವನದ ಶ್ರೀ ಯೋಗಿನಾರೇಯಣ ಮಠ ಭೀಮಲಿಂಗೇಶ್ವರ ದೇವಾಲಯ ತಪೋವನ ನರಸಿಂಹ ಸ್ವಾಮಿ ದೇಗುಲಗಳು ವಿಶ್ವ ವಿಖ್ಯಾತವಾಗಿವೆ. ಕೈವಾರ ಕ್ಷೇತ್ರ.