ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಹಿಳೆಯರ ಸುರಕ್ಷತೆಗೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ದಿನಾಂಕ 19.06. 2023ರಂದು ಸಾಯಂಕಾಲ 4-00 ಗಂಟೆಯಿಂದ 6-00 ಗಂಟೆವರೆಗೆ ನಗರದಾದ್ಯಂತ ಪೊಲೀಸ್ ಇನ್ಸ್‌ಪೆಕ್ಟರ್ ರವರಿಂದ ಹಿಡಿದು ಪೊಲೀಸ್ ಆಯುಕ್ತರು ರವರೆಗೆ ಎಲ್ಲಾ ಹಿರಿಯ ಅಧಿಕಾರಿಗಳನ್ನೊಳಗೊಂಡಂತೆ ಮಹಿಳಾ ಸಿಬ್ಬಂದಿಗಳೊಂದಿಗೆ ನಗರದ ಬಿಎಂಟಿಸಿ ಬಸ್ಸುಗಳಲ್ಲಿ ಸಂಚರಿಸಿ, ಮಹಿಳೆಯರ ಕುಂದು ಕೊರತೆಗಳು / ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಯ್ತು.
ಮಹಿಳೆಯರ ಸುರಕ್ಷತೆಗಾಗಿ ಬೆಂಗಳೂರು ನಗರ ಪೊಲೀಸರು “ಮಹಿಳೆಯ ಸುರಕ್ಷತೆ ನಮ್ಮ ಆದ್ಯತೆ” ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿರುವ ಸುರಕ್ಷತಾ ಕ್ರಮಗಳಾದ :-
ತುರ್ತು ಸಂದರ್ಭದಲ್ಲಿ ಕರೆ ಮಾಡಲು 112 ಗೆ ಕರೆ ಮಾಡಲು, ಸೈಬರ್ ಅಪರಾಧಗಳಿಗೆ ಒಳಗಾದಲ್ಲಿ 1930ಗೆ ಕರೆ ಮಾಡಲು .
ನಗರದ 30 ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸ್ಥಾಪಿಸಿರುವ ಸುರಕ್ಷತಾ ದ್ವೀಪ (Safety Island).
ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ಮಹಿಳೆಯರ ಸಹಾಯ (Women Help desk ಕೇಂದ್ರ ಸ್ಥಾಪಿಸಿರುವುದು.
ಮಹಿಳೆಯರಿಗಾಗಿ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಾದ ಪೂರ್ವದಲ್ಲಿ ಶಿವಾಜಿನಗರ, ಪಶ್ಚಿಮ
ವಲಯದಲ್ಲಿ ಬಸವನಗುಡಿ ಪೊಲೀಸ್ ಠಾಣೆಗಳು ಕಾರ್ಯಚರಣೆ ನಡೆಸುತ್ತಿರುವುದು.
ಸಾಮಾಜಿಕ ಜಾಲತಾಣಗಳಾದ ಕರ್ನಾಟಕ ಪೊಲೀಸ್, ಆಪ್ಲಿಕೇಷನ್ Ksp app, ಟ್ವಿಟ್ಟರ್, ಫೇಸ್‌ಬುಕ್, ವಾಟ್ಸಾಫ್ 9480801000 ಇನ್ಸಟಾಗ್ರಾಂ, ಗಳ ಮುಖಾಂತರ ತಮ್ಮ ಸಮಸ್ಯೆಗಳನ್ನು ತಿಳಿಸಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಜಾಗೃತಿಯನ್ನು ಮೂಡಿಸಲಾಯ್ತು.