ಬೆಂಗಳೂರು :ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕೈವಾರ ತಾತಯ್ಯ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಮಾತನಾಡಿ, ಇವತ್ತು ಕೈವಾರ ತಾತಯ್ಯ ಅವರ ಜನ್ಮದಿನೋತ್ಸವ ಆಚರಣೆ ಮಾಡಲಾಗುತ್ತಿದೆ. ಕೈವಾರ ತಾತಯ್ಯ ಕನ್ನಡ ಮತ್ತು ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದಿದ್ದವರು ಅಂತಾ ಕೇಳಿದ್ದೇನೆ. ಪಿ. ಸಿ ಮೋಹನ್ ಅವರ ಒತ್ತಡಕ್ಕೆ ಮಣಿದು 3ಎಯಿಂದ 2ಎಗೆ ವರ್ಗಾಯಿಸಿದ್ದೆ. ಸರ್ವರಿಗೂ ಸಮಪಾಲು ಎಂಬ ನಂಬಿಕೆಯಿಟ್ಟ ನಾನು ಹಿಂದುಳಿದ ಅಭಿವೃದ್ಧಿ ನಿಗಮಗಳ ಅಭಿವೃದ್ಧಿ ಮಾಡಿದ್ದೇನೆ. ನಂತರ ಮಾತಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಂಸದ ಪಿ. ಸಿ ಮೋಹನ್ ಸದಾ ಸಮಾಜದ ಹತ್ತಿರದಲ್ಲಿರುತ್ತಾರೆ. ಅವರು ಬಡವರ ಪರವಾಗಿ, ಸಮಾಜದ ಪರವಾಗಿ ಮನವಿಗಳನ್ನ ತರುತ್ತಿದ್ದರು. 2ಎಗೆ ಸೇರಿಸುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ಪಿಸಿ ಮೋಹನ್. ಬಡವರು ಹಾಗೂ ಹಿಂದುಳಿದವರ ಬಗ್ಗೆ ಕಳಕಳಿಯಿಂದ ಹಾಗೂ ಪಿಸಿ ಮೋಹನ್ ಮೇಲಿನ ಪ್ರೀತಿಗಾಗಿ ಬಿ. ಎಸ್ ಯಡಿಯೂರಪ್ಪ ಸ್ಪಂದಿಸಿ 2ಎಗೆ ಬಲಿಜ ಸಮುದಾಯವನ್ನು ಸೇರಿಸಿದರು.
ಕಾರ್ಯಕ್ರಮದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಸಚಿವರಾದ ಡಾ.ಸುಧಾಕರ್, ಎಂಟಿಬಿ ನಾಗರಾಜ್, ಸಂಸದ ಪಿ ಸಿ ಮೋಹನ್, ನಟಿ ತಾರಾ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕೈವಾರ ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ಜಯಂತೋತ್ಸವವನ್ನು ಮಡಿವಾಳ ಬಲಿಜ ಮುಖಂಡರಾದ ಶ್ರೀ. ಸಂಜೀವ್ ಅವರ ನೇತೃತ್ವದಲ್ಲಿ ಮಡಿವಾಳ ಸ್ಥಳೀಯರೊಂದಿಗೆ ಆಚರಿಸಲಾಯಿತು .ಆ ನಂತರ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕೈವಾರ ತಾತಯ್ಯ ಜಯಂತ್ಸೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .