ಬೆಂಗಳೂರು : ಬೆಂಗಳೂರು ನಗರದ ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಕೋರಮಂಗಲ 7ನೇ ಬ್ಲಾಕ್ ಸೋಮೇಶ್ವರ ದೇವಸ್ಥಾನದಲ್ಲಿ ನಲ್ಲಿ ಸಂಕ್ರಾಂತಿ ಸಂಭ್ರಮ, ರಂಗೋಲಿ ಸ್ಪರ್ಧೆ ಮತ್ತು ಬಿಟಿಎಂ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಉತ್ತಮ ರಂಗೋಲಿಗಳಿಗೆ ಬಹುಮಾನ ನೀಡಲಾಯಿತು.ಶಾಸಕರಾದ ರಾಮಲಿಂಗ ರೆಡ್ಡಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು ಸುಮಾರು 1000 ಕ್ಕಿಂತ ಅಧಿಕ ಕುಕ್ಕರ್ ,ಕಬ್ಬು, ಎಳ್ಳು-ಬೆಲ್ಲ ವಿತರಣೆ ಮಾರುತಿ ನಗರ ಸ್ಥಳೀಯರಿಗೆ ನೀಡಲಾಯಿತು. ಕರ್ನಾಟಕದಲ್ಲಿ ಬಂಧು ಮಿತ್ರರಿಗೆ ಕಬ್ಬು ಎಳ್ಳು ಬೆಲ್ಲ ಹಂಚುವ ಸಾಮಾಜಿಕ ಸಂಪ್ರದಾಯ ಹಾಗೂ ಗೋವುಗಳಿಗೆ ಪೂಜೆ ಮಾಡುವುದು ಈ ಹಬ್ಬದ ವಿಶೇಷ.