ದಿನಾಂಕ 28 ರಂದು ಸೋಮವಾರ ಬೆಳಗ್ಗೆ 5.30 ಕ್ಕೆ ಬೇಗೂರು ಬೆಂಗಳೂರಿನಿಂದ ವೆಲಂಕಣಿ ಮಾತೇ ಚರ್ಚ್ಗೆ 5 ಜನ ಕಾರಲ್ಲಿ ಹೋಗುತ್ತಾರೆ, ಹೋಗುವ ದಾರಿಯಲ್ಲಿ ಕೃಷ್ಣಗಿರಿ ರಸ್ತೆಯಲ್ಲಿ ಇರುವ a2b ಬಳಿ ದಿಡೀರನೇ ದೊಡ್ಡ ಲಾರಿಯೊಂದು ಕಾರಿನ ಹಿಂಭಾಗ ಬಂದು ಜೋರಾಗಿ ಗುದ್ದಿರುತ್ತದೆ, ಕಾರು ಆಯಾ ತಪ್ಪಿ ಪಲ್ಟಿ ಹೊಡೆದು ಕಾರಿನ ಎಡಭಾಗ ಸಂಪೂರ್ಣ ಜಕಂ ಆಗಿರುತ್ತೆ, ಅಲ್ಲಿದ್ದ ಜನ ಬಂದು ಕಾರಿನಲ್ಲಿ ಇರೋರು ಎಲ್ಲರಿಗೂ ಗಾಯವಾಗಿರುತ್ತೆ, ಒಬ್ಬರಾದ್ರೂ ಸತ್ತು ಹೋಗಿರುತ್ತಾರೆ ಎಂದು ನೋಡಲು ಕಾರಿನಲ್ಲಿ ಇದ್ದ ಒಬ್ಬರಿಗೂ ಯಾವುದೇ ಒಂದು ಚಿಕ್ಕ ಗಾಯವಾಗದೆ, ಏನು ಆಗದೆ ಕಾರಿನಲ್ಲಿ ಬಿದ್ದಿರುತ್ತಾರೆ, ಎಲ್ಲರನ್ನು ಕಾರಿನಿಂದ ಎತ್ತಿ ಅಲ್ಲಿದ್ದ ಜನ ಕಾರನ್ನು, ಕಾರಿನಲ್ಲಿ ಇದ್ದವರನ್ನೂ ಆಶ್ಚರ್ಯವಾಗಿ ನೋಡುತ್ತಾರೆ.
ಅಷ್ಟು ಜೋರಾಗಿ ಪಲ್ಟಿ ಹೊಡೆದ ಕಾರಲ್ಲಿ ಯಾರಿಗೂ ಏನು ಆಗದೆ ಇರುವುದು ಕಂಡು ಕೇಳುತ್ತಾರೆ, ನೀವು ಎಲ್ಲಿಗೆ ಹೋಗುತ್ತಿದ್ದೀರಾ? ಕಾರಿನಲ್ಲಿ ಇದ್ದವರು ಹೇಳುತ್ತಾರೆ ವೇಳಾಂಗಣಿಗೆ ದೇವ ಮಾತೆಯನ್ನು ನೋಡಲು ಹೋಗುತ್ತಿದ್ದೇವೆ ಎಂದು. ಆಗ ಅಲ್ಲಿದ್ದ ಜನರು ಮತ್ತು ಪೊಲೀಸ್ ಇಲಾಖೆಯವರು ಮಾತೆ ಮರಿಯಮ್ಮನವರು ನಿಮ್ಮನ್ನು ಇಲ್ಲಿಯೇ ನೋಡಿದ್ದಾರೆ, ಎಂದು ಹೇಳಿದರು.
ಅದೇ ರೋಡಲ್ಲಿ ಈ ಕಾರ್ ಆಕ್ಸಿಡೆಂಟ್ ಆಗುವ ಮುನ್ನ ಮೂರ್ ಕಾರುಗಳ ನಡುವೆ ಬಹಳ ದೊಡ್ಡ ಅಪಘಾತ ನಡೆದು ಅದರಲ್ಲಿ ಇಬ್ಬರು ಸೀರಿಯಸ್ಸಾಗಿರುವುದು ಕಂಡು ನಿಮ್ಮ ಕಾರು ಸಹ ಅದೇ ರೀತಿ ಅಪಘಾತವಾಗಿದೆ ಆದರೆ ಒಬ್ಬರಿಗೂ ಸಹ ಕಿಂಚಿತ್ತು ಗಾಯವಾಗದೆ ಆರೋಗ್ಯವಾಗಿದ್ದೀರಾ ಎಂದು ಹೇಳಿದರು.
ನಿಮ್ಮ ಕಾರ್ ಅಪಘಾತವಾಗಿ ಪಲ್ಟಿಯಾಗಿರುವುದು ಕಂಡು ಆಂಬುಲೆನ್ಸ್ ಗೆ ತಿಳಿಸಿದ್ದೇವೆ ಎಂದು ಹೇಳಿದರು. ನಮ್ಮನ್ನು ಸುರಕ್ಷಿತವಾಗಿ ಕಂಡ ಅವರು ಮತ್ತೆ ಆಂಬುಲೆನ್ಸ್ ಗೆ ಕರೆ ಮಾಡಿ ಎಲ್ಲರೂ ಆರೋಗ್ಯವಾಗಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿದರು.
ಮನುಷ್ಯನ ಸಾವು ದೇವರ ಕೈಯಲ್ಲಿ ಮಾತ್ರ, ಯಾರೇ ಆಗಿರಲಿ ಯಾರ ಪ್ರಾಣವನ್ನು ಸಹ ತೆಗೆಯಲು ಸಾಧ್ಯವಿಲ್ಲ, ದೇವರು ಕೊಟ್ಟಿರುವುದನ್ನು ದೇವರೇ ತೆಗೆದುಕೊಳ್ಳಬೇಕು.
ಅದ್ಭುತಗಳು ಕೇಳಿರುತ್ತೇವೆ ಆದರೆ ಕಣ್ಣಾರೆ ಕಂಡಾಗ ಅದು ನಮಗೆ ಆದಾಗ ಜೀವನ ಸಾರ್ಥಕವೇನಿಸುತ್ತದೆ. ಆ ರಸ್ತೆಯಲ್ಲಿ ಆಗಾಗಲೇ ಬಹಳ ಮಂದಿ ಅಪಘಾತವಾಗಿ ಸತ್ತಿದ್ದಾರೆ. ಈ ಕಾರಿನಲ್ಲಿ ಇದ್ದ 5 ಜನ ಯಾವುದೇ ಗಾಯವಿಲ್ಲದೆ ಆರೋಗ್ಯವಾಗಿದ್ದಾರೆ ಕಾರಣ ದೇವಮಾತೆ ಮರಿಯಮ್ಮನವರು, ನಾವಿಲ್ಲಿ ಏನ್ ಮಾಡ್ತೀವೋ ಅದೇ ನಮಗೆ ಪ್ರತಿಫಲವಾಗಿ ಬರುತ್ತದೆ.
ಇರೋಷ್ಟು ದಿನ ಒಳ್ಳೇದು ಮಾಡೋಕಾಗಿಲ್ಲ ಅಂತ ಹೇಳಿದರು, ಕೆಟ್ಟದನ್ನು ಮಾಡದೇ ಇರೋಣ, ಸಾವು ಯಾವಾಗ ಬೇಕಾದರೂ ನಮ್ಮ ಕಣ್ಣ ಮುಂದೆ ಬರಬಹುದು.
ಭಕ್ತಿಯಿಂದ ದೇವರ ತಾಯಿಯನ್ನು ನೆನೆದಾಗ ಅವರೇ ನಮ್ಮನ್ನು ಹೂವಿನ ಹಾಸಿಗೆಯಲ್ಲಿ ಮಲಗಿಸಿದ ಹಾಗೆ ರಕ್ಷಣೆಯನ್ನು ಮಾಡುತ್ತಾರೆ.
ಜೀವನ ತುಂಬಾ ಇಲ್ಲ ಚಿಕ್ಕಜೀವನ ಇದನ್ನು ಅರಿತು.
ಪ್ರಾರ್ಥನೆ ಭಕ್ತಿ ಸಹಾಯ ಇಷ್ಟೊಂದು ರೂಡಿಸಿಕೊಂಡರೆ ಸಾಕು ನಮಗೂ ಸಹ ಅದ್ಭುತಗಳು ನಡೆಯುತ್ತದೆ.
ಯೇಸುಕ್ರಿಸ್ತರಿಗೆ ಮಹಿಮೆ,
ಮಾತೆ ಮರಿಯಮ್ಮನವರಿಗೆ ಸ್ತೋತ್ರ.
ಆವೇ ಮರಿಯಾ.
ಸಾಧ್ಯವಾದಷ್ಟು ಒಳ್ಳೆಯದು ಮಾಡಿ.
ಜೀವನಕ್ಕೂ ಮರಣಕ್ಕೂ ಅರ್ಥವನ್ನು ನೀಡಿ.
ವರದಿ ಆಂಟೋನಿ ಬೇಗೂರು